ಪ್ರಶ್ನಾರ್ಥಕ..?
ಏನೊಂದು ಹೇಳದೆನೀ ಹಾಗೇನೇ ಸಾಗಿದೆ..
ಏನೊಂದು ಕೇಳದೆ
ನಾ ಹಾಗೇನೇ ಹೇಳಿದೆ..
ಕೇಳಿದರೆ ಕಾರಣ
ಬದಲಿಸುತಿರುವೆ ಮಾತು..
ಬಯಲಾಗುತಿರುವೆ ನಾ
ನಿನಗೆ ಸೋತು-ಸೋತು..
ನಮ್ಮಿಬ್ಬರ ನಡುವಲಿ ಎಲ್ಲ ಹೇಳಿಕೊಂಡ
ನಾನೊಂದು ಈಗ ತೆರದ ಪುಸ್ತಕ..
ಏನನು ಹೇಳಲಾರದೇ ಸಾಗುತಿರುವ
ನೀನೊಂದು ಪ್ರಶ್ನಾರ್ಥಕ..?
ಇಲ್ಲಿಯವರೆಗೂ ಯಾವ ರಾಧೆಯ
ಕೂಗಿಗೂ ಹೂಗುಟ್ಟದ ಮೂಖ ನಾನು..
ಆದರೆ,
ನೀ ಕರೆಯದೇ ಇದ್ದರೂ ನನಗೆ ನಾನೆ
ಹೂಗುಟ್ಟುಕೊಳ್ಳುತ್ತಿರುವ ಮೂರ್ಖ ನಾನು..
ಇದ ಅರಿಯದ ಹುಡುಗಿ ನೀನೋ..?
ಇಲ್ಲ ಅರಿತು ಎಲ್ಲ ಮರೆತು
ಸಾಗುತಿರುವ ಜಾಣ ಹುಡುಗಿ ನೀನೋ..?
ತಿಳಿಯದು ಮನಕೆ...
ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್