ದಾರಿಯ ಮಧ್ಯೆ
ಕವಲಾದವಳು ನೀನು
ಬದುಕಿನ ಮಧ್ಯೆ
ಒಲವ ಹೆಸರಲ್ಲಿ
ಬಂಧಿ ಆದವನು ನಾನು
ಉಳಿಸಿಕೊಳ್ಳಲಾರದೇ
ಹೊದೆಯಲ್ಲ ನಮ್ಮಿಬ್ಬರ
ನಡುವಿನ ಮಾತನು..
ಸಮಯಕ್ಕೆ ಅರ್ಥ
ವ್ಯಯಿಸಿದ್ದಕ್ಕೆ
ಸಿಕ್ಕರೆ ಉತ್ತರ
ಇಲ್ಲವಾದರೇ ಅದೂ
ಕೇಳದೇ
ಇರುವುದೇ ವ್ಯಯಿಸಿದ್ದಕ್ಕೆ
ಪ್ರಶ್ನೆ.(.?.)
ಸುಮ್ಮನೇಕೋ ಮೂಕ
ಸಾಕ್ಷಿಗಳಾದವು
ನಮ್ಮ ಪ್ರೇಮದ ನಡುವಲಿ
ಬಲಿಪಶುವಾದ ವಸ್ತುಗಳು
ನಮ್ಮ ಪ್ರೇಮವೇ ಮೂಕರಾಗವಾಗಿರುವಾಗ
ಸಾಕ್ಷಿಗಳು ಮೂಕವಾಗಿರುವುದರಲ್ಲೇನು
ಬಂತು ಹೇಳು..
ಆಸೆಗಳ ಕಣಜ ತಾನೆ.!
ನನ್ನಂತೆ ಈ ಮನುಜ
ನಿನ್ನ ಪಡೆದೇ ಪಡೆಯುವನೆಂದು
ಇದ್ದ ಆಸೆಯೋ ದುರಾಸೆಯೋ
ಆಯಿತಲ್ಲ ಕೊನೆಗೂ
ನಿರಾಸೆ
ಮನ ಸುಮ್ಮನಾಯಿತು
ಯಾಕೆ ಗೊತ್ತೇ..?
ಆಸೆಯೇ ದುಃಖಕೆ ಮೂಲ
ಎಂಬ ಬುದ್ಧನ ಮಾತು
ನೆನೆದು..
ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್
No comments:
Post a Comment