ಮದುವೆ ಲಗ್ನದಲ್ಲಿನ
ಮೈಕ್ ಸೆಟ್ಟಿನ ಸೌಂಡು..
ಕಾಣಿಯಾಗಿರೊ ಪಟ್ಟಿ
ಸೇರಿವೆ...
ಮೈಕ್ ಸೆಟ್ ಪ್ರತಿ
ಶುಭ ಕಾರ್ಯದಲ್ಲೂ ಪ್ರತೀಕದಂತಿತ್ತು...
ಪ್ರತಿ ಸಂಜೆಗಳು
ಹೈಕಳ ಸದ್ದಿನಿಂದ ಆವೃತವಾಗುತ್ತಿದ್ದವು...
ಆ ಸದ್ದು ಮಾಯವಾಗಿ
ಸಂಜೆಗೂ ಕೂಡ ನಡು ರಾತ್ರಿಯ
ನೀರವ ಮೌನ ಆವರಿಸಿದೆ..
ಕಾರಣ ,
ಸರಕಾರ ಕೊಟ್ಟರೇನಂತೆ
ಬಿಸಿ ಊಟ, ಸೈಕಲ್
ನಮ್ಮೂರ ಹೈಕಳು ಕಲಿಯಲು
ಸಿಟಿ ಶಾಲೆಗೆ ಸೇರಿವೆ..
ಇನ್ನ ಅವು ಮನೆ ಸೇರುವುದು
ರಾತ್ರಿ ಏಳರ ಊರ ಬಸ್ಸಿಗೆ..
ಅಪ್ಪ ಅಮ್ಮಂದಿರು
ಇದನೆ ಬೀಗುತ್ತಿದ್ದಾರೆ ಅವರಿವರ ಮುಂದೆ
ತಮ್ಮ ಮಗು ಒಂದನೇ
ತರಗತಿಗೆ ಇಂಗ್ಲೀಷ್ ಶಾಲೆಯಲಿ ಕಲಿಯುತಿರೊ ಕುರಿತು.
ಇನ್ನ ಊರ ಜಗುಲಿಗಳೆಂತು
ಬಣಗುಡುತ್ತಿವೆ ಊರ ಯುವಕರಿಲ್ಲದೆ
ಕಾರಣ,
ನಮ್ಮೂರ ಯುವಕರು
ಬೆಂಗಳೂರಂತ ನಗರಗಳ ಕ್ಲಬ್ಬು-ಬಾರುಗಳಲ್ಲಿ
ದುಡಿಯುತಿಹರು ಭೂಮಿಯಲಿ
ಗೆಯ್ಯಲಾರದೆ...
ಒಟ್ಟಾರೆ ನಮ್ಮೂರಿನಲಿ
ಈಗ ಈ ಗಾದೆ ಫೇಮಸ್ಸು
ಬೇಡವೆನಿಸಿದರೆ ಊರು
ಸೇರಿ ಬೆಂಗಳೂರ ಬಾರು...
ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್
No comments:
Post a Comment