ನನ್ನ ನೈಜ ಪ್ರೇಮಕ್ಕೆ
ಸಾಕ್ಷಿ ಕಣೆ
ಏನೂ ಬದಲೆನಿಸದೇ
ನನ್ನ ಮತ್ತು ಆತನ
ದನಿಯ ನಡುವಲಿ..
ನೈಜ ಪ್ರೀತಿಯೇ ಅರ್ಥವಾಗುವುದಿಲ್ಲವಲ್ಲ
ನಿಮ್ಮಂತ ಮರುಳು
ಹುಡುಗಿಯರಿಗೆ
ಪ್ರೇಮವೆಂದರೇ ಹಿಡಿ-ಹಿಡಿ
ಬೂಟಾಟಿಕೆಯ
ಮಾತುಗಳ ಆಶ್ವಾಸನೆ
ಅಲ್ಲ..
ಹಿಡಿದಿಟ್ಟ ಎದೆಯ
ಭಾವಗಳ
ಪ್ರತಿಬಿಂಬ ಬದಲಿಸಿದಾಗ
ಪ್ರೇಮಿಯ ಹಾವ-ಭಾವ
ಅರ್ಥವಾಗದೇನು..?
ಯಾವುದು ಸತ್ಯಕ್ಕೆ
ಸನಿಹ ಎಂದು...
ಏನು ಮಾಡುತ್ತೀರಿ
ಹೇಳು
ನೀವು ಹುಡುಗಿಯರೇ
ಹೀಗೆ
ಬೇಕಿರುವುದು ಬರಿ
ಮಾತು,
ಜೊತೆಗಾಗಿ ಸುತ್ತಾಟ..
ಇವಿಷ್ಟೇ ಪ್ರೇಮ
ಎಂದುಕೊಂಡಿರುವಿರಿ..
ನಿಜವಾದ ಪ್ರೇಮ ಎಂದೂ
ಮೂಕವೇ
ಹಸಿರಸಿರ ಎಲೆಗಳ
ನಡುವಿನ ಮೊಗ್ಗಂತೆ
ಹಾಗೂ ಈ ಉಸಿರ ಏರಿಳಿತಗಳ
ನಡುವೆ
ಜಪಿಸುವ ನಿಮ್ಮ ಹೆಸರಂತೆ..
ಆತ್ಮೀಯವಾಗಿ,
ಜಗನ್ನಾಥ ಆರ್.ಎನ್