Saturday, December 29, 2012

ಹನಿಗಳು-1



1.  ಕೋಟಿ ತಾರೆಗಳಿದ್ದರೂ
     ಚಂದಿರನಾಗೊಲ್ಲ..
     ಕೋಟಿ ಹುಡುಗಿಯರಿದ್ದರೂ
     ಯಾರೂ ನೀನಾಗೊಲ್ಲ..

2.  ಗೆಳತಿ ,
     ನೆನ್ನೆಗಳ ನೆನಪು
     ನಾಳೆಗಳ ಕನಸು
     ಅದು
     ನಿನ್ನ ಮನಸು...

3.  ಬದಲಾಯ್ತು ಬದುಕ ದಾರಿ
     ಅವಳಿಗಾಗಿ..
     ನಾನಾಯ್ತು-ಅವಳಾಯ್ತು
     ಸಾಕಿಷ್ಟು ಬದುಕಿಗಾಗಿ..

4.  ನುಡಿಸಲೀಗ ಅವಳಿಲ್ಲ
     ಅವಳ ನೆನಪೊಂದೆ ನನಗೆಲ್ಲ..

5.  ಬರಿಬೇಕು ಸಾಲು ಕವಿತೆ
     ನಿನಗಾದರೂ..
     ಇರಬೇಕು ನಿನ್ನಾ ಜೊತೆ
     ಯಾವಾಗಲೂ.

6.  ನೀ ಹೀಗೆ ನಗುವಾಗ ಕೂರಬೇಕಿದೆ
     ನಿನ್ನೆ ನೋಡುತ ನಾ ದಿಟ್ಟಿಸಿ..
     ಏನೇನೋ ನುಡಿವಾಗ ಕೇಳಬೇಕಿದೆ
     ಅದನೆ ಆಲಿಸಿ..
     ಒಟ್ಟಾರೆ ಸಾಯಬೇಕೆನಿಸಿದೆ
     ಕೊನೆವರೆಗೂ ನಿನ್ನೆ ಪ್ರೀತಿಸಿ...

Friday, December 28, 2012

ಮುಂಗುರುಳು..


ಯಾರಿರದ ದಾರಿಯಲಿ
ಗೆಳತಿ ಜೊತೆಯಲ್ಲಿ ನೀನು ಇರಲು..
ಮನವೀಗ ಮಳೆಬಿಲ್ಲ ಮುಗಿಲು..
ಮಾತಿರದ ಮೌನದಲಿ
ಭಾವಗಳ ಅದಲು-ಬದಲು
ಗೆಳತಿ ನೀ ಜೊತೆಗಿರಲು..
ಆ ತಂಗಾಳಿಯೊಡನೆ ಸಂಘರ್ಷ ನೆಡೆಸುತಿರಲು
ಆ ನಿನ್ನ ಮುಂಗುರುಳು..
ಅದ ಪದೇ-ಪದೇ ಸರಿಮಾಡಿಕೊಳ್ಳುತಿರೋ
ಆ ನಿನ್ನ ಕೈ-ಬೆರಳು..
ಅಹಾ..! ಅದ ನೋಡಲೆಷ್ಟು ಅದ್ಭುತ
ಆ ಬಿಂಬ ಹಿಡಿದಿಟ್ಟ ನನ್ನ ಕಂಗಳಿಗೆ
ಒದಗಿರಬಹುದು ಅದೆಷ್ಟು ಹಿತ..
ಬೇಕೆಂತಲೇ ನಾ ಕೈ ತಾಗಿಸಿದಾಗ
ನಸುನಕ್ಕು ನೀ ನನ್ನಡೆ ನೋಡಿದಾಗ
ವಶವಾಗದೇ ಇರಲಾರೆನೇ ನಾನು
ಹೇಳಿಬಿಡಲೇ ಇಲ್ಲಿಯೇ ಎಲ್ಲವನು...
















ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್
 

Monday, December 17, 2012

ಪ್ರಶ್ನಾರ್ಥಕ..?

ಪ್ರಶ್ನಾರ್ಥಕ..?

ಏನೊಂದು ಹೇಳದೆ
ನೀ ಹಾಗೇನೇ ಸಾಗಿದೆ..
ಏನೊಂದು ಕೇಳದೆ
ನಾ ಹಾಗೇನೇ ಹೇಳಿದೆ..
ಕೇಳಿದರೆ ಕಾರಣ
ಬದಲಿಸುತಿರುವೆ ಮಾತು..
ಬಯಲಾಗುತಿರುವೆ ನಾ
ನಿನಗೆ ಸೋತು-ಸೋತು..
ನಮ್ಮಿಬ್ಬರ ನಡುವಲಿ  ಎಲ್ಲ ಹೇಳಿಕೊಂಡ
ನಾನೊಂದು ಈಗ ತೆರದ ಪುಸ್ತಕ..
ಏನನು ಹೇಳಲಾರದೇ ಸಾಗುತಿರುವ
ನೀನೊಂದು ಪ್ರಶ್ನಾರ್ಥಕ..?

ಇಲ್ಲಿಯವರೆಗೂ ಯಾವ ರಾಧೆಯ
ಕೂಗಿಗೂ ಹೂಗುಟ್ಟದ ಮೂಖ ನಾನು..
ಆದರೆ,
ನೀ ಕರೆಯದೇ ಇದ್ದರೂ ನನಗೆ ನಾನೆ
ಹೂಗುಟ್ಟುಕೊಳ್ಳುತ್ತಿರುವ ಮೂರ್ಖ ನಾನು..
ಇದ ಅರಿಯದ ಹುಡುಗಿ ನೀನೋ..?
ಇಲ್ಲ ಅರಿತು ಎಲ್ಲ ಮರೆತು
ಸಾಗುತಿರುವ ಜಾಣ ಹುಡುಗಿ ನೀನೋ..?
ತಿಳಿಯದು ಮನಕೆ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್

ಅನಾಮಿಕ

ಅನಾಮಿಕ


ಅವಳ ಮೊದಲ ನೋಟಕೆ
ಅವನು ದಿಕ್ಕೇ ಮರೆತ ನಾವಿಕ..
ಅವಳದೊಂದು ತುಸು ಮಾತಿಗೂ
ಅವನು ಮನಮೋಹಕ..
ಅವಳದೊಂದು ಕಿರುನಗುವಿಗೂ
ಅವನು ಮೂಕ ಪ್ರೇಕ್ಷಕ...
ಅವಳ ತುಸುನೋವಿಗೂ
ಅವನು ಬಹಳ ಭಾವುಕ..
ಅವಳು ಬಂದುಹೋದ ದಾರಿಯಲಿ
ಮೂಡೋ ಹೆಜ್ಜೆ ಗುರುತಿನ ಹಿಂಬಾಲಕ..
ಮೂಡೋ ಅವಳ ನರಳನೇ ಹಿಂಬಾಲಿಸೋ
ಇವ ಪ್ರೀತಿಗೆ ಪ್ರಾಮಾಣಿಕ..
ಆದರೆ ಅವಳ ಹೃದಯಕೆ
ಮಾತ್ರ ಅನಾಮಿಕ..
ಪಾಪ ಹುಡುಗ ಮಾತ್ರ
ಅಮಾಯಕ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್

Thursday, December 13, 2012

ಗಂಡ್ ಮಕ್ಳು..

ಗಂಡ್ ಮಕ್ಳು..

ಆ ಒಂದು ಲುಕ್ಕೀಗೆ
ಈ ಎಮ್ಟಿ (Empty)  ಹಾರ್ಟ್ ಅಲ್ಲಿ
ಗಿರ ಗಿಟ್ಲೆ ಆಟ..
ಈ ಹೆಣ್ ಹೈಕಳ ಲುಕ್ ಅಲ್ಲಿ
ನೂರೆಂಟು ನೋಟ..
ಏನಿಟ್ನೋ ಕಾಣೆ ಆ ಲುಕ್ ಅಲ್ಲಿ
ಪರಮಾತ್ಮನು...
ಒಟ್ಟಾರೆ ಮೈನರ್ರು ಡ್ಯಾಮೇಜು
ಗಂಡ್ಮಕ್ಳ ಹಾರ್ಟು..

ಕಂಡಂತ ಡ್ರೀಮೀನ
ಎಸ್ಟ್ರೀಮಿಗೆ ಆಗ್ಬಿಟ್ಟೋ ಆಗ್ಲೆ
ಮೂರ್ಮಕ್ಕಳು..
ಎಷ್ಟಾದ್ರು ಇವರು
ಗಂಡ್ಮಕ್ಕಳು...

ಮುಖ ತೊಳಿಯೋಕೆ ತೋರ್ತಿದ್ದ
ನಮ್ಮ ಹುಡ್ಗ "ಲೇಝಿ"
ಇಗಂತು ಮೈ-ಮೇಲೆ
ಬಂದಂಗೆ ಆಡ್ತಾನೆ "ಕ್ರೇಝಿ
ಆಗ್ದೇನೆ ಲವ್ ಕನ್ಫರ್ಮ್ (confirm)
ಮಾಡವ್ನೆ ಪರ್ಚೇಸು  3-ಜಿ(3G)..

ಟಿಪ್-ಟಾಪು ರೆಡಿಯಾಗಿ
ಮುಖಕ್ ಹಚ್ಕೊಂಡು
ಡಿಫರೆಂಟು ಕ್ರೀಮು
ಬರೋ ದಾರಿಲೇ ಕಾಯುತ್ತಾ
ಕಾಣ್ತಾನೆ ಡ್ರೀಮು..

ಅವಳು ಬಂದ್ಮೇಲೆ ನೋಡುತ್ತಾ
ನಕ್ಬಿಟ್ರೆ ಓಮ್ಮೆ
ಬೆಲೆಬಂದಂಗೆ ಇವನ
ತಾಲೀಮಿಗೆ..
ಇಲ್ದಿದ್ರೆ ಬೈತಾನೆ
ಸುಮ್-ಸುಮ್ನೆ
ಪಕ್ದೋರಿಗೆ....

ಆತ್ಮೀಯವಾಗಿ..
ಜಗನ್ನಾಥ.ಆರ್.ಎನ್


Wednesday, December 12, 2012

ಅಲೆಮಾರಿ...

ಇರುವುದ ಮರೆತು
ಎನೋ ಹುಡುಕುತ
ಅಲೆಯುವ ಈ ಅಲೆಮಾರಿಯ ಜೀವನ...
ಸರಿ ಹೋಗುವ ಆ ದಿನಗಳು
ಬರುವುದು ಎಂದೋ...?

ನೆನಪಲೇ ಗೀಚುತ
ಕಾಲ ಕಳೆಯುತ
ಮರೆತಿಹ ವಾಸ್ತವ
ಈ ಅಲೆಮಾರಿ..
ಯಾರಿಗೂ ಬೇಕು-ಬೇಡದ ಸಂಚಾರಿ...

ಇಹ-ಪರ ಮರೆತು
ಮೌನದಿ ನಿನ್ನನೇ ಧ್ಯಾನಿಸಿ
ನಿನ್ನ ಸಂಗಕೆ ಪರಿತಪಿಸಿ
ಕಳೆಯುವ ಕಾಲ
ಈ ಅಲೆಮಾರಿ..

ಪ್ರತಿ ರಾತ್ರಿ,
ವಿದಾಯಕೆ ಸಿಗದಿದ್ದ
ಕಾರಣ ನೆನೆದು..
ಆ ತಾರೆ-ಚಂದಿರರೊಡನೆ
ಸಂಭಾಷಣೆ ನಡೆಸುತ
ಅವನ ಪ್ರಶ್ನೆಗೆ ಅವನೇ
ಉತ್ತರಿಸಿಕೊಳುತ..
ದೂಕಿಹ ದಿನಗಳನು
ಈ ಅಲೆಮಾರಿ...

 ಆ ಬ್ರಹ್ಮ ಗೀಚಿದ
ನಾಲ್ಕು ಸಾಲಿನ ಬಳುವಳಿ ಈ ಬದುಕು..
ಎಂಬ ನಿಲುವಲೇ ಕಾಲ ಕಳೆಯುತ
ಸಾಗಿರೋ ಈ ಅಲೆಮಾರಿಯ
ಅಲೆದಾಟಕೆ ಎಂದೋ ಕಡಿವಾಣ...?

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

 

Tuesday, December 11, 2012

ಅಮ್ಮ


ಇಂದು ಅಮ್ಮನ ಕುರಿತಾದ ನನ್ನ ಸಾಲುಗಳು..

ಅಮ್ಮ

ನಾ ಹುಟ್ಟಿದ ಮೇಲೆ ತಾನೆ
ನೀ ನಿನಗಾಗಿ ಬದುಕೋದ ಮರೆತದ್ದು..
ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು
ಎಂತಹ ಅನುಬಂದವಿದು
ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..


ನಾ ಗರ್ಭದಲ್ಲಿರುವಾಗಲೇ
ನನ್ನ ಮೇಲೆ ಕಟ್ಟತೊಡಗಿದ
ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ..
ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..

ಅತ್ತರೆ ಹಸಿವೆಂದು
ಮೊದಲು ಎದೆಹಾಲ ಉಣಿಸಿ..
ನನ್ನ ಖುಶಿಗೆಂದು ಅಪ್ಪನಿಂದ
ಏನೆಲ್ಲಾ ಆಟಾಸಾಮಾನ ತರಸಿ..
ನನ್ನ ನಗುವ ನೀ ನೋಡುತ್ತಿದ್ದೆ..

ತುತ್ತು ತಿನ್ನಲು ಹಟತೊಟ್ಟರೆ
ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ
ನನ್ನ ಅಂಬಾರಿಯಂತೆ ಕೂರಿಸಿ
ಏನೆಲ್ಲಾ ಆಟ ಆಡಿಸಿ
ಚಂದಮಾಮನ ಕೊಡಿಸೋ ಆಸೆ ತೋರಿಸಿ
ನನ್ನ ಕಿಲ ಕಿಲ ನಗುವಲಿ
ಆ ನಗುವ ನಡುವಲಿ ತುತ್ತು ತಿನ್ನಿಸಿ
ಏನೆಲ್ಲಾ ಸಂತಸವ ಕಾಣುತ್ತಿದ್ದೆ..

ನೀನು ನಿನಗೋಸ್ಕರ
ಅಂದಿನಿಂದ ಖುಷಿಪಟ್ಟ ದಿನ
ನಾ ನೋಡಲೇ ಇಲ್ಲವಲ್ಲ
ಕಾರಣ ನಿನಗೆ ನಾನೇ ಎಲ್ಲ ಅಲ್ಲ..
ನನ್ನ ಕಣ್ಣಲೊಂದು ಹನಿ ಬಿದ್ದರೆ
ಅಂದು ಮರುಗಿದವಳು ನೀನೆ
ಇಂದಿಗೂ ಎಲ್ಲಿದ್ದರು ಕನಳುವಳು ನೀನೆ..
ನಿನ್ನ ಋಣ ಹೇಗೆ ತೀರಿಸಲಿ
ಮರು ಜನ್ಮದಲ್ಲಾದರೂ ನನಗೆ
ಕರುಣಿಸು ನಿನ್ನ ಸ್ಥಾನವ...

ಆತ್ಮೀಯವಾಗಿ..
ಜಗನ್ನಾಥ ಆರ್.ಏನ್

Monday, December 10, 2012

ಓಲವು

ಓಲವು

ಉಮ್ಮಳಿಸಿ ಬರುವ
ನಿನ್ನ ನೆನಪಿಗೆ..
ಕಣ್ಮುಚ್ಚೋ ಕಾಲವನೇ
ಕಾಯುತ ಕನಸಾಗಿ ಬರುವ
ನಿನ್ನ ಮುಖಪುಟಕೆ
ಎನೆಂದು ಹೆಸರಿಡಲಿ..?
ಓಲವೆಂದು ಹೆಸರಿಡಲೇ ಗೆಳತಿ...

ಓಲವೆಂದು ಹೆಸರಿಡಲು
ಹೆಣಗುತಿರುವ
ಈ ಜೀವದ ಪರಿಸ್ಥಿತಿ
ಹೇಳತೀರದು..
ಈ ಭಾವದ ಮನಸ್ಥಿತಿ
ನೀಡೋ ಖುಷಿಯ ಪರಿಗೆ
ಈ ಜೀವ ಹೇಗೆ ಸೋಲದೇ
ಇರದು ...?

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್



Wednesday, December 5, 2012

ಆಕೆ..?

ಆಕೆ..?

ಸಿಗುತಿಲ್ಲ ಎಷ್ಟು ಹುಡುಕಿದರು
ಕನಸಲಿ ಕಂಡ ಆಕೆಯ ವಿಳಾಸ..
ಇಂದಿಗೂ ಕನಸಲಿ ಕಂಡ
ಆಕೆಯ ನಗು ದನಿಗುಡುತ್ತಲೆ ಇದೆ.
ಸದಾ ಕಾಡುತ್ತಲೆ ಇದೆ.

ಕನಸ ವಿವರಣೆ ನೀಡುವೆ ಹುಡುಕಿಕೊಡುವಿರಾ..?
ಸಿಕ್ಕರೆ ನಿಮಗ್ಯಾರಿಗಾದರೂ
ನನ್ನ ತಳಮಳ ತಿಳಿಸಿ
ಕಳಿಸಿಕೊಡುವಿರಾ ನನ್ಮ ಬಳಿ..

ಎಷ್ಟು ದಿನವಾದರೂ ಸಿಗಲೇ ಇಲ್ಲ
ಕೇಳಿಕೊಂಡವರ್ಯಾರೂ ಕಳುಹಿಸಲೇ ಇಲ್ಲ...
ಎಷ್ಟಾದರೂ ಇದು ಹೇಳಿ-ಕೇಳಿ
ವಯಕ್ತಿಕ ಪ್ರಪಂಚ..
ಕೇಳಿಸಿಕೊಳ್ಳುವ ಕಿವಿಗಳೇ ಇಲ್ಲದಿರುವಾಗ
ಹೇಳಿಯಾದರೂ ಏನು ಪ್ರಯೋಜನ..?

ಆಗೊಮ್ಮೆ -ಇಗೊಮ್ಮೆ
ಕಾಡುತ್ತಲೇ ಉಳಿದಿದ್ದ ಆಕೆ ಯಾರೆಂದು
ಈ ಬಾರಿ ಊರಿಗೆ ಹೋದಾಗ
ಗೋಡೆ ಮೇಲಿನ ಫೋಟೊದ ಚಿತ್ರವ
ತದೇಕಚಿತ್ತದಿ ನೋಡುತ್ತಿದ್ದಾಗಲೇ ತಿಳಿದದ್ದು
ಆ ನಗು ನನ್ನಮ್ಮನದು ಎಂದು..

ಇದ್ದಾಗ ಒಂದಿಷ್ಟು ಸಣ್ಣ ನಗುವ
ಅವಳ ಮೊಗದಲ್ಲಿ ನೋಡಲೇ ಇಲ್ಲ..
ನಗುವ ತರಿಸೋ ಪ್ರಯತ್ನವ ಮಾಡಲೇ ಇಲ್ಲ ನಾನು...
ಬರಿ ದುಡಿದೆ ದುಡಿದೆ ದೂರವಾಗಿ ಹೋದಳು...


ಆತ್ಮೀಯವಾಗಿ..
ಜಗನ್ನಾಥ ಆರ್.ಎನ್



Wednesday, February 22, 2012

ಮೌನರಾಗ

ಈ ಪ್ರೀತಿಯು ಕಾಣದ
ಅಗೋಚರ
ಇರುವುದು ನನ್ನಲಿ
ಚರಾ-ಚರ
ಸಕಲವೂ ಪ್ರೀತಿಯೇ
ಪ್ರೀತಿಯೇ ಸಕಲವು
ನೀನಿದ್ದರೆ ನಿರಂತರ
ಸಾವಿರ ಸ್ವರಗಳ ಸಂಗಮವೇ ರಾಗ
ಸಾವಿರ ಭಾವಗಳ ಸಂಗಮವೇ ಅನುರಾಗ
ರಾಗಕ್ಕೆ ಪದ ಸಿಗದೆ
ಭಾವಕ್ಕೆ ಮುದ ಸಿಗದೆ
ಉಳಿದೋಯ್ತು ಹಾಗೆ
ನನ್ನೆದೆಯ ಬೇಗೆ
ಇದೆ ತಾನೆ ಅರಿವಿಲ್ಲದೇ
 ನಾ ಗುನುಗುವ ಮೌನರಾಗ

ಸವಿ ಸುನಾದ


ಮನಸಿನಲಿ ಏನೋ ನಿನಾದ
ಪ್ರೀತಿಯದೇ ಸವಿ ಸುನಾದ
ಪ್ರೀತಿಸದೆ ಪ್ರೀತಿಸುತ
ಬದಲಾಗಿಹೆ   ನಾ
ಅರಿಯದೇ ಮೊದಲಿದನಾ
ಹುಡುಕಾಡಿದೆನಾ
ಓಲವಿದು ನಿಜವೇನಾ? |

ಓಲವಿನ ತೇರಿನಲಿ ಪ್ರೀತಿಯ ಅಂಬಾರಿಯ
ಹೊತ್ತೊಯ್ಯೋ ಮೆರವಣಿಗೆ
ಕನಸಿನ ಕಂಗಳಲಿ ಅವಿತಿರೋ ಭಾವಗಳ
ಬರದೋಯ್ಯೊ ಬರವಣಿಗೇನೇ
ಓಲವಿರಬಹುದಾ?

ಫ್ರೀತಿಸದೆ ಪ್ರೀತಿಸಿದೇ
ಅರಿಯದೆ ಮೊದಲಿದೆನಾ|
ಹುಡುಕಾಡಿದೆನಾ?
ಓಲವಿದು ನಿಜವೇನಾ?

ನೋಟಗಳ ಅಂತರದಿ ಪ್ರಶ್ನೆಗಳ ಉಳಿಸುತ
ನೋವಿನಲೆ ಕಳೆದಿರುವೆ|
ಭಾವಗಳ ಬಸಿರನು ಮಾತುಗಳ ನಡುವಲಿ
ಹಾಗೆ ಏಕೆ ಉಳಿಸಿರುವೆ
ನಿಜ ಹೇಳುವೆಯಾ?