Friday, February 28, 2014
Thursday, February 27, 2014
ಶಿವ-ಶಿವ
ಸುಮಾರು ಒಂದು ವರ್ಷದ ಹಿಂದೆ ಸುಮ್ಮನೆ “ಶಿವರಾಜ್
ಕುಮಾರ್ “ ಮನಸಿನಲ್ಲಿಟ್ಟುಕೊಂಡು ಬರೆದ ಸಿನಿ ಗೀತೆ…
ಸೆಂಟಿಮೆಂಟು
ಸೈಡ್ ಗೆ ಇಟ್ಟು
ಜೋಗಿ ಸ್ಟೈಲ್ ಲಿ ಕೂದ್ಲ ಬಿಟ್ಟು
ಓಂ
ನ ಸ್ಟೈಲ್ ಲಿ ಎಂಟ್ರಿ ಕೊಟ್ಟು
ಕೈಲಿ
ಹಿಡಿದ್ರೆ ಲಾಂಗು ಮಚ್ಚು
ಇಲ್ವೇ
ಇಲ್ಲ ದೂಸ್ರ ಮಾತು
ಶಿವ-ಶಿವ…… (ಪಲ್ಲವಿ)
ಏಜು-ಗೀಜು
ಮ್ಯಾಟ್ರೇ ಅಲ್ಲ
ಎಂತ
ಸ್ಟೆಪ್ಪು ಎಂತ ಲುಕ್ಕು
ಸ್ಟೆಪ್ಪಿಗೊಂದು
ಹೊಸ ಕಿಕ್ಕು
ಅಣ್ಣ
ಕುಣಿದರೆ ಶಿವಣ್ಣ ಕುಣಿದರೆ
ಕೈಲಿ
ಹಿಡಿದ್ರೆ ಲಾಂಗು ಮಚ್ಚು
ಲಾಂಗಿಗೆಂತು
ಹೊಸಾ ಗ್ರಿಪ್ಪು
ಅಣ್ಣ
ಹಿಡಿದರೆ ಶಿವಣ್ಣ ಹಿಡಿದರೆ
ಶಿವ-ಶಿವ… (ಚರಣ 1)
ಎಂಟ್ರಿಯಿಂದ
ಇಲ್ಲಿತನಕ
ಪಡ್ಡೆಯಿಂದ
ಗೆಡ್ಡೆವರೆಗೂ
ಮೆಚ್ಚಿದಂತ
ನಟನಿವ..
ಎಷ್ಟೆ ಆದ್ರು
ಯಾರಿವ..?
ಅಣ್ಣೋರ ಮಗನಿವ..
ಕರುನಾಡಿಗೊಬ್ಬನೇ
ಈ ಶಿವ…
ಶಿವ-ಶಿವ..ಪರಮಶಿವ
.. (ಚರಣ 2)
--ರಾಮೇನಹಳ್ಳಿ
ಜಗನ್ನಾಥ
Wednesday, February 26, 2014
ಗೆಳತಿ,
ಏನಿದೆ ಈ ಮುಗಿಲಲಿ..
ಏನಿದೆ ಈ ಕಡಲಲಿ..
ಎಲ್ಲಕೂ ಮಿಗಿಲಿದೆ
ನಿನ್ನಾ ಮಡಿಲಲಿ..
..ರಾಮೇನಹಳ್ಳಿ ಜಗನ್ನಾಥ
ಏನಿದೆ ಈ ಮುಗಿಲಲಿ..
ಏನಿದೆ ಈ ಕಡಲಲಿ..
ಎಲ್ಲಕೂ ಮಿಗಿಲಿದೆ
ನಿನ್ನಾ ಮಡಿಲಲಿ..
..ರಾಮೇನಹಳ್ಳಿ ಜಗನ್ನಾಥ
Tuesday, February 25, 2014
ತೇರು..
ಬುಡ ಸಹಿತ ಕೀಳಲಾಗದ
ನಿನ್ನ ಭಾವಗಳ ಬೇರು..
ನೆನಪ ರಹಿತ ಇರಲಾರದ
ನನ್ನ ರಾತ್ರಿಗಳ
ಹೊತ್ತೊಯ್ಯೋ ತೇರು...
----ರಾಮೇನಹಳ್ಳಿ ಜಗನ್ನಾಥ
ನಿನ್ನ ಭಾವಗಳ ಬೇರು..
ನೆನಪ ರಹಿತ ಇರಲಾರದ
ನನ್ನ ರಾತ್ರಿಗಳ
ಹೊತ್ತೊಯ್ಯೋ ತೇರು...
----ರಾಮೇನಹಳ್ಳಿ ಜಗನ್ನಾಥ
Wednesday, February 19, 2014
ಅಲೆ..
ಗೆಳೆಯ,
ನಿನ್ನ
ಒಲವಿಗೆ ಕೊಚ್ಚಿಹೋದ
ದಡದ ಮಡಿಲು
ಸಿಗದೆ
ಅಲೆಯಾಗಿ
ಉಕ್ಕುತಿಹಳು
ನೆನೆ-ನೆನೆದು
ಬಿಕ್ಕುತಿಹಳು
ಯಾಕೋ
ಇಂದು
ಹೆಚ್ಚು-ಹೆಚ್ಚು
ಕೊರಗುತಿಹಳು
ಮತ್ತೆ-ಮತ್ತೆ
ಕರಗುತಿಹಳು
ನಿನ್ನ
ಒಲವಿಗೆ ಅದರ ಚಲುವಿಗೆ…
ಪಲ್ಲವಿಯಲು
ಹಾಡಿದ
ಚರಣದಲು
ಬೇಡಿದ
ಈ ಹಾಳು
ಹುಡುಗಿಯ ಹಾಡು ಕೇಳದೆ..?
ಖುಷಿಯ
ಮಡಿಲಲಿ
ಉರುಳಬೇಕಿದೆ
ನಾಲ್ಕು ಹನಿಗಳು
ನಿನ್ನ
ಭುಜದಲಿ..
ಸೇರು
ಗೆಳೆಯನೆ..ನನ್ನ ಒಡೆಯನೆ..
---ರಾಮೇನಹಳ್ಳಿ
ಜಗನ್ನಾಥ
Wednesday, February 12, 2014
ತಬ್ಬಲಿ..
ಗೆಳತಿ,
ಹಾಳು ಹೃದಯದ
ಭಾವಗಳ ಮಾಡುತ
ತಬ್ಬಲಿ..
ಉಳಿದು ಹೋಗಬೇಡ ಹಾಗೆ
ಕಣ್ಣಂಚಿನ ಹನಿಯಾಗಿ..
…..ರಾಮೇನಹಳ್ಳಿ ಜಗನ್ನಾಥ
Subscribe to:
Posts (Atom)