ತೋಚಿದ್ದ ಗೀಚುವ ಈ ಅಲೆಮಾರಿ ಮನಸ್ಸಿನಿಂದ ಮೂಡೋ ನಾಲ್ಕು ಸಾಲುಗಳೇ ಈ ನನ್ನ ಜೇನುಗೂಡು...
Wednesday, February 22, 2012
ಮೌನರಾಗ
ಈ ಪ್ರೀತಿಯು ಕಾಣದ
ಅಗೋಚರ
ಇರುವುದು ನನ್ನಲಿ
ಚರಾ-ಚರ
ಸಕಲವೂ ಪ್ರೀತಿಯೇ
ಪ್ರೀತಿಯೇ ಸಕಲವು
ನೀನಿದ್ದರೆ ನಿರಂತರ
ಸಾವಿರ ಸ್ವರಗಳ ಸಂಗಮವೇ ರಾಗ
ಸಾವಿರ ಭಾವಗಳ ಸಂಗಮವೇ ಅನುರಾಗ
ರಾಗಕ್ಕೆ ಪದ ಸಿಗದೆ
ಭಾವಕ್ಕೆ ಮುದ ಸಿಗದೆ
ಉಳಿದೋಯ್ತು ಹಾಗೆ
ನನ್ನೆದೆಯ ಬೇಗೆ
ಇದೆ ತಾನೆ ಅರಿವಿಲ್ಲದೇ
ನಾ ಗುನುಗುವ ಮೌನರಾಗ
No comments:
Post a Comment