7-8 ವರ್ಷಗಳ ಹಿಂದೆ
ದಾವಣಗೆರೆಯಲ್ಲಿ ಇಂಜಿನೀಯರಿಂಗ್ ಓದುವಾಗ ಬರೆದ ಕೆಲವು ಹನಿಗಳು..
1. ಹುಡುಗಾಟಿಕೆ
ವಯಸ್ಸಿನಲ್ಲಿ
ಸ್ವಲ್ಪವಾದರೂ ‘ಹುಡುಗಾಟಿಕೆ’
ಆದರೆ ಇತ್ತೀಚೆಗೆ
ಹುಡುಗಿಯರಿಗೆ
ಹುಡುಗ ‘ಆಟಿಕೆ’
--------------------------------
2.ದುಬಾರಿ
ಅಂದು ಗರ್ಲ್ ಫ್ರೆಂಡುಗಳು
ಆಗುತ್ತಿದ್ದರು
ಎಲ್ಲಕೂ “ಆಭಾರಿ”
ಆದರೆ ಇಂದು ಗರ್ಲ್
ಫ್ರೆಂಡುಗಳು
ಬಲು “ದುಭಾರಿ”
--------------------------------
3. ಪ್ರಶ್ನೆ..?
ಅವನಂದನು ನಲ್ಲೆ
ನೀ ಹುಣ್ಣಿಮೆ ದಿನದ
ಚಂದಿರನಂತೆ ಎಂದು
ಅವಳಂದಳು ಬೇರೆ ದಿನಗಳು
ಇನ್ಯಾರಂತೆ ಎಂದು..?!
ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್
No comments:
Post a Comment