Friday, March 7, 2014

ಈಕೆ..

ಚಂದದ ರೇಶಿಮೆ ಸೀರೆ
ತೊಳೆಯಲು ಗಿರಾಕಿಗಳು
ಕೊಟ್ಟಾಗ,
ಉಟ್ಟಂತೆ-ತೊಟ್ಟಂತೆ
ಕನಸ ಕಂಡು
ಮತ್ತೆ,
ಗಿರಾಕಿಗಳ ಕೈಗಿಡುವಳು
ಈಕೆ,
ಆಸೆಗಣ್ಣಿನಿಂದ
ಪಕ್ಕದಲ್ಲಿದ್ದ
ತನ್ನ
ಗಂಡನ ನೋಡುತ..

---ರಾಮೇನಹಳ್ಳಿ ಜಗನ್ನಾಥ

4 comments:

Badarinath Palavalli said...

ಕೆಲವು ಸಿನಿಮಾಗಳಲ್ಲಿ ದೋಬಿಗಳು ಗಿರಾಕಿಗಳ ಸೀರೆ ಉಟ್ಟಂತೆ ತೋರಿಸಿದ್ದಾರಲ್ಲ ಎಂದನು ಗಂಡನೂ.

Pradeep Rao said...

ha ha nice one...

Unknown said...

ಹ್ಹ.ಹ್ಹ..ಉಟ್ಟು ಆ ಕ್ಷಣ ಸುಮ್ಮನಾಗಬಹುದಷ್ಟೇ ಸರ್..ಹೊರಗೆ ಗಂಡನೊದಿಗೆ ಸುತ್ತಾಡಲು ಆಗೊದಿಲ್ಲ..ತನ್ನ ಅಕ್ಕ-ಪಕ್ಕದ ಮನೆಯವರೊಂದಿಗೆ ಸೀರೆಯ ಬಗ್ಗೆ ಹರಟಲಾಗುವುದಿಲ್ಲ ಬದ್ರೀನಾಥ್ ಸರ್..

Unknown said...

ಧನ್ಯವಾದಗಳು ಪ್ರದೀಪ್ ರಾವ್ ರವರೆ..