ನಿನ್ನ ಕಣ್ಣ ರೆಪ್ಪೆ ಅಂಚು
ಹೊಂಚುಹಾಕಿ
ಮಾಡುತಿಹ ಸಂಚನು
ಕಂಡ ಈ ಅಲೆಮಾರಿ ಮನಸು
ಸುರಿಸುತಿಹುದು ನವಿರಾದ
ಆಸೆಕಿಡಿಯ ಜಡಿಮಳೆಯನು...
ತುಟಿ ಅಂಚಿನ ಸಣ್ಣದೊಂದು
ಕಿರುನಗೆಗೆ ಮೂಡಿದ
ಗುಳಿಗೆನ್ನೆ ಕಂಡ
ಈ ಅಲೆಮಾರಿ,
ಹೂಮನಸ ತುಂಬ
ನಿನ್ನ ಸೂರ ಕಟ್ಟಿ
ನಿನಗಾಗೆ ಕಾದಿಹನು...
ನನ್ನ ದೇವಿ ನೀನು,
ಹೊಂಗನಸ ತೇರ ಕಟ್ಟಿ
ಕಾದಿಹ ಹುಡುಗನ
ಹೂಮನಸಲೀಗ ಶುರುವಾಗಿದೆ
ಅರಿವಿಲ್ಲದೇ ಮೆರವಣಿಗೆಯು...
ನಿನ್ನ ಕುರಿತೆ ಸಾಲು-ಸಾಲು
ಬರವಣಿಗೆಯು....
-------ರಾಮೇನಹಳ್ಳಿ ಜಗನ್ನಾಥ
5 comments:
ತುಂಬಾ ಅರ್ಪಣಾ ಭಾವ ಗೆಳೆಯ. ಆಕೆ ಪುಣ್ಯ ಮಾಡಿದ್ದರು.
http://badari-poems.blogspot.in
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಬದ್ರೀನಾಥ್ ಸರ್...
ಮುಂದುವರೆಯಲಿ ನೆನಪಿನ, ಭಾವಗಳ ಮೆರವಣಿಗೆ :-)
ಚೆಂದದ ಬರಹ . ಸಾಗುತಿರಲಿ ಬರವಣಿಗೆಯ ಮೆರವಣಿಗೆ...
ಪ್ರಶಸ್ತಿ ಮತ್ತು ವೀಣಾರವರಿಗೆ ಧನ್ಯವಾದಗಳು..
Post a Comment