Tuesday, July 16, 2013

ಹನಿಗಳು-

ಗೆಳತಿ,
ನೋಡೋ ಕಂಗಳಿಗೆ
ಕಾಣಬಹುದು ನೂರಾರು ಹುಡುಗಿಯರು..
ನಿನ್ನ ಕಾಣದ ನನ್ನ ಕಂಗಳಿಗೆ
ಕಾಣುವವರೆಲ್ಲಾ ನೀನೇ ಅನಿಸುವರು...
----------------------------------------
ಗೆಳತಿ,
ಖಾಲಿ ಹೃದಯದಿ
ರೇಖೆ ಬಿಡಿಸಿದೆ...
ಕ್ಯಾಮೆ ಇಲ್ಲದ
ಖಾಲಿ ಮನಸಿಗೆ
ಕೆಲಸ ನೀಡಿದೆ
ಅದಕೀಗ,
ಹೃದಯ ಮನಸುಗಳೆರಡು
ನಿನ್ನೆ ಬೇಡಿವೆ...
-------------------------------------
ಗೆಳತಿ
ನಿನ್ನ ನೆನಪುಗಳ ನಭದಲ್ಲೀಗ
ಮೋಡ ಕವಿದ ವಾತಾವರಣವಿದೆ..
ಅರಿಯದೇ ಸುರಿಯಬಹುದೇನೋ
ಈಗ ಮಳೆಹನಿ....
-----------------------------------------
ನನ್ನ ಮೌನದೊಳಗಿನ
ಸದ್ದು...
ನೀನೇ ಕಣೆ
ಓ ನನ್ನ ಮುದ್ದು....
------------------------------------
ರಾಮೇನಹಳ್ಳಿ ಜಗನ್ನಾಥ

3 comments:

Badarinath Palavalli said...

ಈಗ ಮಳೆಹನಿ ನನಗೆ ನೆಚ್ಚಿಯಾಯಿತು ಗೆಳೆಯ. ಸರಳತೆ ಇಲ್ಲಿ ಮೈವೆತ್ತಿದೆ.
http://badari-poems.blogspot.in

ಮಂಜಿನ ಹನಿ said...

ಹುಡುಗಿ ಕರಗಿ ಮಳೆಹನಿಯಾಗೇ ಸುರಿಯಬಹುದು. ಮನದಲ್ಲಿ ಒಳ್ಳೇ ಫಸಲು ಬೆಳೆಯುವ ಹದವಿದೆ ಹನಿಗಳಿಗೆ :)

- ಪ್ರಸಾದ್.ಡಿ.ವಿ.

Unknown said...

ಬದ್ರೀನಾಥ್ ಸರ್ ಮತ್ತು ಪ್ರಸಾದ್ ರವರಿಗು ಧನ್ಯವಾದಗಳು...